ಇಥಾಕ

1. ಅಯೋನಿಯದ ಸಪ್ತದ್ವೀಪಗಳಲ್ಲಿ ಒಂದು. ವಿಸ್ತೀರ್ಣ 37 ಚ. ಮೈ. ಜನಸಂಖ್ಯೆ ಏಳು ಸಾವಿರಕ್ಕಿಂತಲೂ ಹೆಚ್ಚು. ಪರ್ವತಮಯ ದೇಶ. ಪಶ್ಚಿಮಭಾಗದಲ್ಲಿ ಮಲೋ ಕೊಲ್ಲಿಯಿದೆ. ವಥಿ, ಅಯೆಟೊ, ಅನಾಯ್, ಎಕ್ಸಾಯ್ ಎಂಬ ನಾಲ್ಕು ಜಿಲ್ಲೆಗಳಿವೆ. ಜನ ಧೈರ್ಯಶಾಲಿಗಳೆಂದು ಹೆಸರು ಪಡೆದಿದ್ದಾರೆ. ಮುಖ್ಯಪಟ್ಟಣ ಇಥಾಕ. ಜನಸಂಖ್ಯೆ 3210. ಪುರಾಣ ಪ್ರಸಿದ್ಧನಾದ ಒಡೀಸಿಯಸ್ಸಿನ ಊರೆಂದು ಖ್ಯಾತವಾಗಿದೆ.

	2. ನ್ಯೂಯಾರ್ಕ್ ಪ್ರಾಂತ್ಯದ ಕೇಯುಗ ಸರೋವರದ ದಕ್ಷಿಣ ತುದಿಯಲ್ಲಿದೆ. ಫಿಂಗರ್ ಸರೋವರದ ಸಮೀಪದಲ್ಲಿ ಕಣಿವೆ, ಪ್ರಪಾತಗಳು ಮತ್ತು ಜಲಪಾತಗಳಿರುವುದರಿಂದ ಅಲ್ಲಿಯ ಪ್ರದೇಶ ಸೌಂದರ್ಯದ ಬೀಡಾಗಿದೆ. ಜಲಪಾತಗಳಲ್ಲಿ ಬಟರ್ ಮಿಲ್ಕ್ ಹಾಗೂ ಟೌಘಾನಾಕ್ (215') ಮುಖ್ಯವಾದುವು. ಇಲ್ಲಿ ಕಾರ್ನೆಲ್ ವಿಶ್ವವಿದ್ಯಾನಿಲಯವಿದೆ. ಸಂಗೀತ, ನಾಟಕ ಹಾಗೂ ವ್ಯಾಯಾಮ ಮತ್ತು ಶಿಕ್ಷಣಗಳ ಕೇಂದ್ರವಾಗಿದೆ. ಕಾಗದ, ಸಿಮೆಂಟ್, ಗೊಬ್ಬರ, ಚರ್ಮ, ಬಂದೂಕು ಮತ್ತು ಯಂತ್ರಸಾಮಗ್ರಿಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ.										 
 (ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ